ದಿಯಾ 2020 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದ್ದು, ಕೆ. ಎಸ್. ಅಶೋಕ ಬರೆದು ನಿರ್ದೇಶಿಸಿದ್ದಾರೆ ಮತ್ತು ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ್ ಅಡಿಯಲ್ಲಿ ಡಿ ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ. ಪೃಥ್ವಿ ಅಂಬರ, ದೀಕ್ಷಿತ್ ಶೆಟ್ಟಿ ಮತ್ತು ಕುಶೀ ರವಿ ನಟಿಸಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಇದನ್ನು ಭಾರತದಲ್ಲಿ 7 ಫೆಬ್ರವರಿ 2020 ರಂದು ಬಿಡುಗಡೆ ಮಾಡಲಾಯಿತು. ಈ ಚಲನಚಿತ್ರವನ್ನು ತೆಲುಗಿನಲ್ಲಿ ಡಿಯರ್ ಮೇಘಾ ಎಂದು ರೀಮೇಕ್ ಮಾಡಲಾಯಿತು ಮತ್ತು 3 ಸೆಪ್ಟೆಂಬರ್ 2021 ರಂದು ಬಿಡುಗಡೆ ಮಾಡಲಾಯಿತು ಹಿಂದಿಯಲ್ಲಿ ಇದರ ಮರುನಿರ್ಮಾಣ ನಡೆಯಲಿದೆ ಪೃಥ್ವಿ ಆ ಪಾತ್ರವನ್ನು ಅಬಿನಯಿಸಲಿದ್ದಾರೆ. == ಪಾತ್ರವರ್ಗ == ದಿಯಾ ಸ್ವರೂಪ್ "ಸೂಪ್" ಆಗಿ ಕುಶೀ ರವಿ ಆದಿಯಾಗಿ ಪೃಥ್ವಿ ಅಂಬಾರ್ ರೋಹಿತ್ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ಆದಿಯ ತಾಯಿ ಡಾ.ಲಕ್ಷ್ಮಿ "ಲಕ್ಕಿ" ಪಾತ್ರದಲ್ಲಿ ಪವಿತ್ರಾ ಲೋಕೇಶ್ ದಿಯಾ ತಂದೆಯಾಗಿ ಅರವಿಂದ್ ರಾವ್ ದಿಯಾ ತಂದೆಯ ಸ್ನೇಹಿತನಾಗಿ ರಾಜೇಶ್ ರಾವ್ ರೋಹಿತ್ ಸಹೋದರಿಯಾಗಿ ಜ್ಯೋತಿ ರೈ ರೈಲಿನಲ್ಲಿ ಪ್ರಯಾಣಿಕನಾಗಿ ಚಂದನ್ ರಾವಂದೂರ್ ಎನ್ ಗೋಕುಲ್ ಚಕ್ರವರ್ತಿ ಆಟೋ ಡ್ರೈವರ್ ಆಗಿ ರಾಕೇಶ್ ಶ್ರೀನಿವಾಸ್ ಆಟೋ ಡ್ರೈವರ್ ಆಗಿ ರೋಹಿತ್ ಗೆಳೆಯನಾಗಿ ದರ್ಶನ್ ಅಪೂರ್ವ ರುಡ್ವಿನ್ ರೋಹಿತ್ ಸ್ನೇಹಿತನಾಗಿ == ನಿರ್ಮಾಣ == ದಿಯಾ ಎಂಬುದು ಕೆಎಸ್ ಅಶೋಕ ಅವರ ಎರಡನೇ ಚಲನಚಿತ್ರವಾಗಿದ್ದು, ಅವರು ಮೊದಲ ಚಿತ್ರ ಹಾರರ್ ಚಲನಚಿತ್ರ ವಾದ 6-5=2 ಅನ್ನು ಮಾಡಿದ ಏಳು ವರ್ಷಗಳ ನಂತರದ್ದಾಗಿದೆ. ಕಥೆಯು ಮಹಿಳಾ ನಾಯಕಿಯ ಬಾಹ್ಯ ಮತ್ತು ಆಂತರಿಕ ಅನುಭವಗಳು ಮತ್ತು ಸಂಭಾಷಣೆಗಳ ಮೇಲೆ ಕೇಂದ್ರೀಕೃತವಾಗಿದೆ. ಯುರೋಪಿಯನ್ ಪ್ರಣಯ ಚಲನಚಿತ್ರಗಳಂತೆ ಯಾವುದೇ ಹಾಡುಗಳಿಲ್ಲದ ವಾದ್ಯಸಂಗೀತವನ್ನು ಬಳಸಲು ಅಶೋಕ ನಿರ್ಧರಿಸಿದರು. ಬೆಂಗಳೂರು, ಕಾರವಾರ, ಕುದುರೆಮುಖ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಸಲಾಗಿದೆ . == ಸಂಗೀತ == ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ ಆದರೆ "ಸೋಲ್ ಆಫ್ ದಿಯಾ" ಎಂಬ ಒಂದು ಪ್ರಚಾರ ಗೀತೆಯನ್ನು ಹೊಂದಿತ್ತು. == ಬಿಡುಗಡೆ == ಚಲನಚಿತ್ರವು ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ 8 ಮಾರ್ಚ್ 2020 ರಂದು ಸ್ಟ್ರೀಮ್ ಮಾಡಲು ಲಭ್ಯವಾಯಿತು, ಆದರೆ ಅದರ ಉಪಗ್ರಹ ಹಕ್ಕುಗಳನ್ನು ಜೀ ಕನ್ನಡ ಸ್ವಾಧೀನಪಡಿಸಿಕೊಂಡಿತು. == ವಿಮರ್ಶೆ == ದಿಯಾ ಅನ್ನು ವಿಮರ್ಶಿಸಿದ ಟೈಮ್ಸ್ ಆಫ್ ಇಂಡಿಯಾದ, ಸುನಯನಾ ಸುರೇಶ್ ಐದರಲ್ಲಿ ನಾಲ್ಕು ಸ್ಟಾರ್ ಕೊಡುತ್ತ ಕಥೆಯ ನೈಜತೆ, ಮೂರು ಪ್ರಮುಖ ಅಭಿನಯಗಳು, ಛಾಯಾಗ್ರಹಣ, ಮತ್ತು ಸಂಗೀತ ಇವುಗಳನ್ನು ಹೊಗಳಿದರು. ಸುರೇಶ್ ತಮ್ಮ ತೀರ್ಮಾನವನ್ನು ಹೀಗೆ ಕೊಟ್ಟರು: "...ಈ ಚಲನಚಿತ್ರವು ಕಮರ್ಷಿಯಲ್ ಸ್ಟೇಪಲ್ಸ್ ಇಲ್ಲದೆ ಕೆಚ್ಚೆದೆಯ ಹೊಸ ಶೈಲಿಯಲ್ಲಿ ಸಿನೆಮಾವನ್ನು ಅನುಭವಿಸಲು ಬಯಸುವವರಿಗೆ. . . ". ದಿ ಹಿಂದೂ ಗಾಗಿನ . ಶಿವಕುಮಾರ್ ಅವರು ತಮ್ಮ ವಿಮರ್ಶೆಯಲ್ಲಿ, ನಿರ್ದೇಶನ, ನಟನೆ, ಬರವಣಿಗೆ ಮತ್ತು ಸಂಗೀತಗಳನ್ನು ಶ್ಲಾಘಿಸಿದರು ಮತ್ತು ಅಂತ್ಯವನ್ನು ತೀರಾ ಹಠಾತ್ ಎಂದು ಟೀಕಿಸಿದರು. ಕುಮಾರ್ ಹೇಳಿದರು: ". . . ನಟನೆಯು, ವಿಶೇಷವಾಗಿ ಕುಶೀ ಮತ್ತು ಪ್ರುಥ್ವಿ ಅವರದು, ಮೊದಲ ದರ್ಜೆಯದಾಗಿದೆ . ಸುಂದರವಾಗಿ ರಚಿಸಿದ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಎಲ್ಲಾ ಚೆಲುವು ಮತ್ತು ಸಮಚಿತ್ತಗಳಿಂದ ಕೂಡಿದೆ. . ." . ಡೆಕ್ಕನ್ ಹೆರಾಲ್ಡ್‌ನಲ್ಲಿ, ವಿವೇಕ್ ಎಂ.ವಿ. ಅವರು ನಿರ್ದೇಶನ, ಸಂಗೀತ ಶೆಟ್ಟಿ ಮತ್ತು ಅಂಬರರ ಮತ್ತು ಅಭಿನಯವನ್ನು ಹೊಗಳಿದರು ಆದರೆ ಕಥಾವಸ್ತುವನ್ನು ಬಹುಮಟ್ಟಿಗೆ ಊಹಿಸಬಹುದಾದದ್ದು ಎಂದೂ ಟೀಕಿಸಿದರು . ಕುಶೀ ಅಭಿನಯವನ್ನು ಸಹ ಟೀಕಿಸಿದರು. ನಿಧಾನಗತಿಯ ಆರಂಭದ ಹೊರತಾಗಿ ಕುಶೀ ಅಭಿನಯ ಮತ್ತು ಚಿತ್ರಕಥೆಯನ್ನು ಏಷ್ಯಾನೆಟ್ ನ್ಯೂಸ್ ಶ್ಲಾಘಿಸಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗಾಗಿ, ಎ.ಶಾರದ ಅವರು ಚಿತ್ರಕಥೆ, ನಿರ್ದೇಶನ, ಪ್ರದರ್ಶನಗಳು, ಸಂಗೀತ ಮತ್ತು ಛಾಯಾಗ್ರಹಣಕ್ಕಾಗಿ ಪ್ರಶಂಸೆಯೊಂದಿಗೆ ಐದರಲ್ಲಿ ನಾಲ್ಕು ನಕ್ಷತ್ರಗಳನ್ನು ನೀಡಿದರು. ಶಾರದ ಕಾಮೆಂಟ್ ಮಾಡಿದ್ದಾರೆ: ". . . ಸಾಮಾನ್ಯವಲ್ಲದ ಪ್ರೇಮಕಥೆಯನ್ನು ಕೌಶಲ್ಯದಿಂದ ಹೇಳುತ್ತ ನಿರ್ದೇಶಕರು ಆಘಾತಗಳೊಂದಿಗೆ ವಿಶಿಷ್ಟ ರೀತಿಯ ಸಂಭ್ರಮವನ್ನು ಸೃಷ್ಟಿಸುತ್ತಾರೆ. . ." . == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ದಿಯಾ @ ಐ ಎಮ್ ಡಿ ಬಿ